ಟಾರ್ಗೆಟ್ ಗ್ರೂಪ್

  • ಸುರಭಿ ವೃದ್ಧಾಶ್ರಮ ಸಮಾಜದಲ್ಲಿ ನೊಂದ ಮಕ್ಕಳಿಂದ ದೂರವಾದ ಮತ್ತು ಕುಂಟುಂಬದಲ್ಲಿ ಮಕ್ಕಳ ನಿರ್ಲಕ್ಷಕ್ಕೆ ಒಳಗಾದ ಹಿರಿಯ ನಾಗರಿಕರಿಗೆ ಆಶ್ರಯ ನೀಡುವುದರ ಜೊತೆಗೆ ಧಾಖಲಾದ ಪ್ರತಿಯೊಬ್ಬ ವೃದ್ಧರನ್ನು ಪ್ರೀತಿಯಿಂದ ಸಹನೆಯಿಂದ ಭಾವಪೂರ್ಣವಾದ ಆರೈಕೆಯ ಮೂಲಕ ಅವರ ಕುಟುಂಬ ಸದಸ್ಯರ ಹಾಗೂ ಮಕ್ಕಳ ನೆನಪು ಬಾರದಂತೆ ಅವರ ಅವಶ್ಯಕತೆಗಳನ್ನು ಈಡೇರಿಸಬಹುದಾಗಿದೆ.
  • ಹಿರಿಯ ನಾಗರಿಕರ ಹಾಗೂ ವೃದ್ಧರ ಆರೋಗ್ಯದ ಬಗ್ಗೆ ವೃದ್ಧಾಶ್ರಮಗಳು ಕಾರ್ಯತಂತ್ರ ಮತ್ತು ಯೋಜನೆಯನ್ನು ಅನುಷ್ಠಾಣಗೊಳಿಸುವುದರಿಂದ ಪ್ರಸ್ತುತ ಭವಿಷ್ಯದ ಪೀಳಿಗೆಗೆ ಭದ್ರ ಪಡಿಸಿಕೊಳ್ಳಲು ಹಿರಿಯ ಜೀವಿಗಳಿಗೆ ಸುಸ್ತಿರ ಗುರಿಗಳ ಸಾಕ್ಷಾತ್ಕಾರಕ್ಕೆ ಸಹಕಾರಿಯಾಗುತ್ತದೆ. ಸಮಗ್ರ ಮತ್ತು ಗುಣಮಟ್ಟದ ಆರೈಕೆಯನ್ನು ಒದಗಿಸುವುದು ಮತ್ತು ಹಿರಿಯ ನಾಗರಿಕರ ಸುರಕ್ಷಿತ ಸಹಾನೂಬೂತಿ, ಜನ್ಮ ಜಾತ ಪರಿಸರ ಸುತ್ತ ಮುತ್ತಲಿನ ಸಂಭಂದಿಕ ಗೌರವ ಮತ್ತು ಘನತೆಯಿಂದ ಬದುಕುವಂತೆ ನೋಡಿಕೊಳ್ಳುವದು. ಹಿರಿಯ ನಾಗರಿಕರ ಜೀವನದ ಜ್ಞಾನ ಮತ್ತು ಅನುಭವಗಳನ್ನು ರಚನಾತ್ಮಕ ರೀತಿಯಲ್ಲಿ ಬಳಸಿಕೊಳ್ಳುವ ಮೂಲಕ ಕಾರ್ಯ ನಿರ್ವಹಿಸುವದು. ಹಿರಿಯ ನಾಗರಿಕರು ಮತ್ತು ಸಮಾಜ ಎರಡಕ್ಕೂ ಅರ್ಥ ಪೂರ್ಣವಾಗಿ ಕೊಡುಗೆ ನೀಡಬಹುದಾಗಿದೆ. ಸಾಮಾಜಿಕ ಹಿರಿಯ ನಾಗರಿಕರ ಸಂಸ್ಥೆಯನ್ನು ಸ್ಥಾಪಿಸುವದು ಹಿರಿಯ ನಾಗರಿಕರನ್ನು ಸಂಹನ ಮಾಡುವದು ಅವರಿಂದ ಆರೋಗ್ಯಕರ ಮತ್ತು ಶಾಂತಿಯುತ ಸಮಾಜದ ಅಗತ್ಯವಿರುವ ಮೌಲ್ಯಗಳನ್ನು ಕಲಿಯುವದು. ಸಾಮಾಜಿಕ ಪ್ರತ್ಯೇಕತೆಯನ್ನು ಹೋಗಲಾಡಿಸಲು ಒಡನಾಟ, ಭಾವನಾತ್ಮಕ ಬೆಂಬಲ ಚಿಕಿತ್ಸೆ, ಮನರಂಜನಾ ಸೌಲಭ್ಯಗಳು ಹಾಗೂ ಚಟುವಟಿಕೆಗಳನ್ನು ಒದಗಿಸುವುದು. ದೈನಂದಿನ ಜೀವನದಲ್ಲಿ ಹಿರಿಯ ನಾಗರಿಕರಿಗೆ ಸ್ವಾತಂತ್ರ್ಯವನ್ನು ಒದಗಿಸುವುದು ಮತ್ತು ಜೀವನದ ಉನ್ನತ ಮೌಲ್ಯಗಳನ್ನು ಪುನರಸ್ಥಾಪಿಸುವದು. ಹಿರಿಯರಿಗೆ ಸವಾಲಿನ ಮತ್ತು ನೆಮ್ಮದಿಯ ಅಗತ್ಯವಿರುವ ಆಶ್ರಯವನ್ನು ನಿಗದಿಪಡಿಸುವುದು ಸಕಾರಾತ್ಮಕವಾದ ಉದ್ದೇಶವಾಗಿರುತ್ತದೆ. ವಯಸ್ಸಾದ ಹಿರಿಯರು ತಮ್ಮ ಪ್ರೀತಿ ಪಾತ್ರರು, ಸ್ನೇಹಿತರು ಮತ್ತು ಕುಟುಂಬದವರು ಸಹಭಾಗಿತ್ವದಲ್ಲಿ ತಮ್ಮ ಸಂತೋಷವನ್ನ ಪಡೆಯುತ್ತಾರೆ.
  • ವೃದ್ಧಾಶ್ರಮಗಳಲ್ಲಿ ವೃದ್ಧರ ಆರೋಗ್ಯ ಭಾವನಾತ್ಮಕ ಸಂಬಂಧ ಸಧೃಡತೆಯ ಯೋಜನೆ ಮತ್ತು ಗುರಿ ಹೊಂದಿಸುವ ಹಂತಗಳಲ್ಲಿರುವಾಗ ವಯಸ್ಸಾದ ಪ್ರೀತಿ ಪಾತ್ರರು ತಮ್ಮ ಆಸೆ ಬೇಡಿಕೆಗಳನ್ನು ಅನುಭವಿಸಲು ಅವರಿಗೆ ಬೇಕಾದ ಸಂಪನ್ಮೂಲಗಳನ್ನು ಗುರುತಿಸುವುದು ಮುಖ್ಯ . ಭಾರತದಲ್ಲಿ ವಯಸ್ಶದವರ ಜನಸಂಖ್ಯೆಯಲ್ಲಿ ಸ್ಥಿರ ಏರಿಕೆ ಇದೆ. ನಮ್ಮ ಸಾಂಪ್ರದಾಯಿಕ ಮೌಲ್ಯಗಳು ಹಿರಿಯರಿಗೆ ಗೌರವ ಮತ್ತು ಕಾಳಜಿಯನ್ನು ನೀಡುವಲ್ಲಿ ಒತ್ತು ನೀಡುತ್ತವೆ. ವಯಸ್ಸಾದ ವ್ಯಕ್ತಿ ಸಾಕಷ್ಟು ಸಾಮಾಜಿಕ ಭದ್ರತೆಯ ಸಮಸ್ಸೆಗಳನ್ನು ಎದುರಿಸುತ್ತಿದ್ದಾರೆ. ಮುಪ್ಪು ಒಂದು ಪ್ರಮುಖ ಸಾಮಾಜಿಕ ಸವಾಲಾಗಿ ಮಾರ್ಪಟ್ಟಿದೆ. ವೃದ್ಧರ ಆರ್ಥಿಕ ಮತ್ತು ಆರೋಗ್ಯಕರ ಅಗತ್ಯತೆಗಳನ್ನು ಪೂರೈಸುವ ಅವಶ್ಯಕತೆಯಿದೆ.ವಯಸ್ಸಾದವರ ಭಾವನಾತ್ಮಕ ಅಗತ್ಯೆತೆಗಳಿಗೆ ಅನೂಕೂಲಕರವಾದ ಸಾಮಾಜಿಕ ಪರಿಸರವನ್ನು ವೃದ್ಧಾಶ್ರಮಗಳು ರಚಿಸುವ ಮೂಲಕ ಸ್ಪಷ್ಠವಾದ ಗುರಿ ಮತ್ತು ಉದ್ದೇಶವನ್ನು ತಿಳಿಸುತ್ತದೆ..

ಅಭಿಪ್ರಾಯ

ಸಂದರ್ಶಕರ ಅಭಿಪ್ರಾಯ:-

ಶ್ರೀ ನಿಂಗನಗೌಡ ಪಾಟೀಲ ಆದ ನಾವು ಕುಟುಂಬ ಸಮೇತ ದಿನಾಂಕ 10-19-2019 ರಂದು ಸುರಭಿ ವೃದ್ಧಾಶ್ರಮಕ್ಕೆ ಅನರಿಕ್ಷೀತವಾಗಿ ಭೇಟಿ ನೀಡಿದೇವು. ನಮ್ಮ ಮನೆಯಲ್ಲಿ ಒಂದು ಕಾರ್ಯಕ್ರಮವಿತ್ತು ನಮ್ಮ ಮಗುವಿಗೆ ಏನೆಲ್ಲಾ ಹಬ್ಬ ಸಂಭ್ರಮಮಾಡುವ ನಾವು ಕೊನೆಯ ಅವಸ್ಥೆಯಾದ ಮುಪ್ಪಾವಸ್ಥೆಗೆ ಅಷ್ಟೂಂದು ಅಸಡ್ಯ ಏಕೆ? ಅನ್ನುವ ಅಭಿಪ್ರಾಯ ಬಂದಾಗ ಈ ವೃದ್ಧಾಶ್ರಮಕ್ಕೆ ಭೇಟಿಮಾಡಿದೇವು.

ಈ ವೃದ್ಧಾಶ್ರಮಕ್ಕೆ ಬಂದಾಗ ನನಗೆ ಮುಪ್ಪಿನ ಬಗ್ಗೆ ಹಾಗೇನು ಅನಿಸಲಿಲ್ಲಾ ಕಾರಣ ಇಲ್ಲಿನ ಮೇಲ್ವಿಚಾರಕರು ಮತ್ತು ಸಿಬ್ಬಂದಿ ವರ್ಗದವರು ಮಾತೃಹೃದಯದಿಂದ ಕೂಡಿದವರ ಇದ್ದು. ಮನೆಯವರಿಗಿಂತಲು ಇಲ್ಲಿ ಚನ್ನಾಗಿ ಪ್ರೀತಿಯಿಂದ ನೋಡಿಕೊಳ್ಳುವ ವಾತಾವರಣ ಖಂಡಿತ ಇದೆ.

ದೇವರು ಎಲ್ಲವನ್ನು ಎಲ್ಲವನ್ನು ಸರಿಯಾಗಿ ಇಟ್ಟಿಲ್ಲ. ಸರಿಯಾಗಿ ಇರುವರು ಸರಿಯಾಗಿ ಇಲ್ಲದವರ ಬಗ್ಗೆ ಚುರೆಚುರು ಮೂಲೆಯಲ್ಲಿ ಪ್ರೀತಿ, ಮಮತೆ, ಸಹಕಾರ, ಅಂತಃಕರಣ ಇದ್ದರು ಸಾಕು ಜಗತು ಸುಂದರವಾಗಿ ಕಾಣಿಸುತ್ತದೆ ಎಂದು ಹೇಳಳು ಬಯಸುತ್ತೇನೆ. ಏಕೆಂದರೆ ಈ ಸುರಭಿ ವೃದ್ಧಾಶ್ರಮದಲ್ಲಿ ಎಲ್ಲರನ್ನು ಬಹಳ ಪ್ರೀತಿ ಕಾಳಜಿಯಿಂದ ನೋಡಿಕೊಳ್ಳುತ್ತಾರೆ ಮತ್ತೆ ನಾನು ಭೇಟಿ ನೀಡಲು ಈ ವೃದ್ಧಾಶ್ರಮಕ್ಕೆ ಬರಲು ಹರ್ಷಿಸುತ್ತೇನೆ.

“ಮುಪ್ಪು ತಪ್ಪೆ” ಈ ಮಾತನ್ನು ನನ್ನ ಇಡೀ ಜೀವಮಾನವನ್ನು ಎಚ್ಚರಿಸುವ ಸಂದೇಶವಾಗಿದೆ.

ಶ್ರೀ ನಿಂಗನಗೌಡ ಪಾಟೀಲ
(ಶಿಕ್ಷಕರು)




ಗ್ರಾಮ ಪಂಚಾಯತಿ ಹುಲಕೋಟಿ ಕಾರ್ಯದರ್ಶಿ ಆದ ನಾನು ಸುರಭೀ ವೃದ್ಧಾಶ್ರಮಕ್ಕೆ ಭೇಟಿ ನೀಡಿದಾಗ ಎಲ್ಲಾ ಹಿರಿಯ ಜೀವಿಗಳನ್ನು ನೋಡಿ ಬಹಳ ಖುಷಿಯಾಯಿತು ಹಾಗೂ ಈ ವೃದ್ಧಾಶ್ರಮವೂ ಎಲ್ಲಾ ರೀತಿಯಿಂದಲೂ ಚನ್ನಾಗಿದೆ ಹಾಗೂ ಅತಿ ಶಿಸ್ತಿನಿಂದ ಕೋಡಿದ ವೃದ್ಧಾಶ್ರಮವಾಗಿದೆ.

* Well Maintained old age Home nice place ಹಾಗೂ ಈ ದಿನ ನನ್ನ ಜೀವನದಲ್ಲಿ ಸುಂದರವಾದ ದಿನಯಂದು ತಿಳಿಯುತ್ತೇನೆ ಮತ್ತು ಇಲ್ಲಿಯ ವಯೋವೃದ್ಧರು ಇವರ ಆರೋಗ್ಯ ಆಯುಷ ಚನ್ನಾಗಿ ಇರಲು ಆ ದೇವರನ್ನು ಕೇಳಿಕೊಳ್ಳುತ್ತೇನೆ.

ಗ್ರಾಮ ಪಂಚಾಯತಿ ಕಾರ್ಯದರ್ಶಿ

ಸಮುದಾಯದ ಅಭಿಪ್ರಾಯ:-

ಶ್ರೀ ಮನೋಹರಗೌಡ ಪಾಟೀಲ ಗ್ರಾಮ ಪಂಚಾಯತಿ ಸಧ್ಯಸರಾದ ನಾನು ಸುರಭಿ ವೃದ್ಧಾಶ್ರಮಕ್ಕೆ ಭೇಟಿ ನೀಡಿದಾಗ ಅಲ್ಲಿಯ ವಾತಾವರಣ ನನಗೆ ಬಹಳ ಇಷ್ಟಯಾಯಿತು ಮತ್ತು ಅಲ್ಲಿಯೇ ವಯೋ ವೃದ್ಧರನ್ನು ಪ್ರೀತಿ ಕಾಳಜಿ ಅತ್ಯುತಮ್ಮ ರೀತಿಯಲ್ಲಿ ನೋಡಿಕೊಳ್ಳುತ್ತಿದ್ದಾರೆ. ಇಲ್ಲೆ ಸಿಬಂದಿ ವರ್ಗವರು ಎಲ್ಲಾ ವೃದ್ದರನ್ನು ಸ್ವಚ್ಚತೆಯನ್ನು ಉತ್ತಮ ರೀತಿಯಲ್ಲಿ ನೋಡಿಕೊಂಡಿರುತ್ತಾರೆ. ಇಲ್ಲಿಯ ವಯೋವೃದ್ಧರನ್ನು ನೋಡಿ ನಮ್ಮ ಹುಲಕೋಟಿ ಗ್ರಾಮದಲ್ಲಿ ಇಂತಹ ವೃದ್ಧಾಶ್ರಮ ಇದೇಯಲ್ಲಾ ಎಂದು ಖುಷಿಯಾಯಿತು. ಇವರಿಗೆ ಆ ದೇವರು ಚನ್ನಾಗಿ ನೋಡಿಕೊಳ್ಳುವ ಶಕ್ತಿಯನ್ನು ಕೋಡಲೆಂದು ಹರ್ಷಿಸುತ್ತೇನೆ.

ಶ್ರೀ ಮನೋಹರಗೌಡ ಪಾಟೀಲ
(ಗ್ರಾಮ ಪಂಚಾಯತಿ ಸಧ್ಯಸರು)




ಶ್ರೀ ಸುರೇಶ ಮುಕನ್ನವರ ಆದನಾನು ಸುರಭಿ ವೃದ್ಧಾಶ್ರಮದ ಎಲ್ಲಾ ಹಿರಿಯ ಜೀವಿಗಳಿಗೆ ಹಾಗೂ ಇಲ್ಲಿನ ಸಿಬ್ಬಂದಿ ವರ್ಗದವರಿಗೆ ನನ್ನ ಆನಂತ ವಂದನೆಗಳು ವೃದ್ಧಾಶ್ರಮದಲ್ಲಿ ಇರುವಂತ ಎಲ್ಲಾ ವಯೋವೃದ್ದರೊಂದಿಗೆ ಮಾತನಾಡಿದಾಗ ನನಗೆ ಹಾಗೂ ನನ್ನ ಕುಟುಂಬದವರಿಗೆ ಆನಂದವಾಯಿತು. ಅದರ ಜೋತೆಗೆ ದುಖಃವಾಯಿತು ಏಕೆಂದರೆ ಈಗ ಇರುವಂತಹ ಅವರ ವಯೋವೃದ್ಧರ ಸ್ಥಿತಿಗೆ ಆಸರೆಯಾಗಿ ಇರಬೇಕಾದಂತಹ ಮಕ್ಕಳು ಹಾಗೂ ಸಂಬಂದಿಕರು ಅವರನ್ನು ನೀಡಿಕೊಳ್ಳದೆ ಇರುವುದೇ ನನಗೆ ಬೇಜಾರವಾಯಿತು. ಮೇಲಾಗಿ ಮಾತ್ರು ಪಿತ್ರು ದೇವೂಭವ ಎಂದು ತಂದೆ ತಾಯಿಯನ್ನು ಎಂದಿಗೂ ಕೈ ಬೀಡಬಾರದೆಂದು ಒಂದು ಸಂಗತಿ ತಿಳಿದು ಬಹಳ ನೂವಾಯಿತು ಅದೇ ರೀತಿ ಸಿಬಂದ್ಧಿ ವರ್ಗವು ವೃದ್ಧರನ್ನು ಪ್ರೀತಿ ಕಾಳಜಿಯಿಂದ ನೋಡಿಕೊಳ್ಳುವ ರೀತಿ ನೋಡಿ ಸಂತೋಷವಾಯಿತು. ಹಾಗೂ ವೃದ್ಧಾಶ್ರಮದಲ್ಲಿ ಇರುವಂತಹ ವಯೋವೃದ್ಧರಿಗೆ ಒಳ್ಳೆಯ ಶಕ್ತಿ ಹಾಗೂ ಆರೋಗ್ಯ ಭಗ್ಯಾ ನೀಡಲಿ ಎಂದು ಆ ಭಗವಂತನಲ್ಲಿ ಬೇಡಿಕೊಳ್ಳೋತ್ತೇನೆ.

ಸುರೇಶ ಮುಕನ್ನವರ
(ಆಟೋ ಚಾಲಕರು)

ಫಲಾನುಭವಿಯ ಅಭಿಪ್ರಾಯ :-

ವೆಂಕಟಕೃಷ್ಣ ರಡ್ಡಿ ಆದ ನಾನು ಸುರಭಿ ವೃದ್ಧಾಶ್ರಮದ ಫಲಾನುಭವಿಯಾಗಿ ಒಂದು ವರ್ಷ ವೃದ್ಧಾಶ್ರಮದಲ್ಲಿ ಕಾಲ ಕಳದೆ. ನನಗೆ ನನ್ನ ಮನೆಯಲ್ಲಿ ನೋಡಿಕೊಳ್ಳಲು ಯಾರು ಇದ್ದಿಲ್ಲ. ಹಾಗೆ ಒಂದು ದಿನ ಒಬ್ಬ ಅಪರಿಚಿತ ವ್ಯಕ್ತಿ ಸುರಬಿ ವೃದ್ಧಾಶ್ರಮದ ಬಗ್ಗೆ ಹೇಳಿ ಕಳಸಿದರು. ವೃದ್ಧಾಶ್ರಮದಲ್ಲಿ ಇರುವರಿಗೂ ವೃದ್ಧಾಶ್ರಮದ ಎಲ್ಲಾ ಸಿಬ್ಬಂದಿ ವರ್ಗದವರು ನನ್ನನ್ನು ತಮ್ಮ ತಂದೆಯಂತೆ ಅಥವಾ ತಮ್ಮ ಮನೆಯ ಹಿರಿಯ ಜೀವಿಯಂತೆ ನನ್ನನ್ನು ನೋಡಿಕೊಂಡಿರುತ್ತಾಗೆ ನನಗೆ ಅನುಪಸ್ಥಿತಿ ಬಂದಾಗ ಒಂದು ಸುವ್ಯವಸ್ಥೆಯನ್ನು ಮಾಡಿಕೊಟ್ಟಿರುತ್ತಾರೆ. ಇವರಿಗೆ ತುಂಬ ಹೃದಯವಾದ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಸುರಭಿ ಎಂಬ ಸಂಸ್ಥೆಯನ್ನು ನನ್ನ ಇಡಿ ಜೀವಮಾನ ಇರುವರೆಗೂ ಎಂದಿಗೂ ಮರೆಯುದಿಲ್ಲ.

ವೆಂಕಟಕೃಷ್ಣ ರಡ್ಡಿ
(ವೃದ್ಧಾಶ್ರಮದ ಫಲಾನುಭವಿ)




ಶ್ರೀಮತಿ ನೀಲವ್ವ ಶಿರಹಟ್ಟಿ ಕಾರವಾರ ಆದನಾನು ಮನೆಯಲ್ಲಿ ಗಂಡ ಮಕ್ಕಳು ಕುಟುಂಬದವರೊಡನೆ ಕಲಹ ಉಂಟಾಗಿ ಮನೆಯಲ್ಲಿ ಇರಲು ಜಾಗವಿಲ್ಲದೇ ಹೇಗೆ ಎಂದು ವಿಚಾರ ಮಾಡುತ್ತಾ ಕುಳಿತಾಗ ನನ್ನ ಸ್ನೇಹಿತೆ ನನ್ನನ್ನು ಕರೆದುಕೊಂಡು ಹಿರಿಯ ನಾಗರಿಕರ ಸಹಯವಾಣಿ ಕೇಂದ್ರಕ್ಕೆ ಹೊದೆಯೋ ಅಲ್ಲಿ ನನ್ನ ದುಖಃವನ್ನು ಎಲ್ಲಾ ಹೇಳಕೊಂಡೆ ನನಗು ಇರಲು ಜಗವಿಲ್ಲ, ಯಾವದಾದರೂ ಆಶ್ರಮಕ್ಕೆ ಕಳೆಸಿಕೊಡಿಯಂದೆ ಆಗ ಅವರು ಸುರಭಿ ವೃದ್ಧಾಶ್ರಮ ಹುಲಕೋಟಿಯಲ್ಲಿ ವಯೋ ವೃದ್ಧರಿಗೆ ಇರಲು ವ್ಯವಸ್ಥೆ ಇದೆ ಎಂದು ಕಳಿಸಿದರು. ನಾನು ಏನು ತಿಳಿಯದೆ ವೃದ್ಧಾಶ್ರಮಕ್ಕೆ ಬಂದೆ ನನ್ನ ಕಷ್ಟವನ್ನು ಇವರ ಮುಂದೆ ಹೇಳಿಕೊಂಡೆ ಇಲ್ಲಿ ಎಲ್ಲಾ ವೃದ್ಧರನ್ನು ತಮ್ಮ ತಂದೆ ತಾಯಿಯಂತೆ ನೋಡಿಕೊಳ್ಳುತ್ತಾರೆ. ಯಾರಿಗೆ ಏನೇ ಸಮಸ್ಯೆಯಾದರು ಸ್ಪಂದನೆ ಮಾಡುತ್ತಾರೆ. ನನ್ನನ್ನು ತಮ್ಮ ಸಂಬಂದಿಕರಂತೆ ನೋಡಿಕೊಂಡರು. ನನಗೆ ಕುಟುಂಬದವರನೇ ಕಲಹ ಬಂದಾಗ ಅವರನ್ನು ಕರೆಸಿ ಅವರ ಜೋತೆ ಮಾತನಾಡಿ ನನ್ನ ಸಮಸ್ಯೆಯನ್ನು ಬಗಿಹರಿಸಿದರು. ಮತ್ತೆ ಕುಟುಂಬದವರ ಜೋತೆ ಒಂದು ಮಾಡಿ ಕಳೆಸಿಕೊಟ್ಟರು ಇಲ್ಲಿಯ ಎಲ್ಲಾ ಸಿಬ್ಭಂದಿ ವರ್ಗದವರಿಗೆ ಗೌರವ ಪೂರ್ವಕವಾಗಿ ಅಭಿನಂದನೆಗಳನ್ನು ಅರ್ಪಿಸುತ್ತೇನೆ. ನಾನು ಮತ್ತು ನನ್ನ ಕುಟುಂಬ ಸುರಭಿ ಸಂಸ್ಥೆಯನ್ನು ಮರೆಯುವದಿಲ್ಲ ಏಕೆಂದರೆ ಎಲ್ಲಾ ಹಿರಿಯ ಜೀವಿಗಳಿಗೆ ಯಾರು ನೋಡಿಕೊಳ್ಳದೆ ಇದ್ದರು ಸುರಭಿ ಸಂಸ್ಥೆ ಅಂತವರಿಗೆ ಊರು ಗೂಲಾಗಿ ನಿಂತಿವೆ.

ಶ್ರೀಮತಿ ನೀಲವ್ವ ಶಿರಹಟ್ಟಿ
(ಸುರಭಿ ವೃದ್ಧಾಶ್ರಮದ ವಯೋವೃದ್ದೇ)



ಯಶಸ್ವಿ ಯಶೋಗಾಧೆಗಳು